ಕಾಲ ಬಂದಾಗ ರಾಜಕೀಯಕ್ಕೆ ಬರುವೆನು - ಭವ್ಯ
Posted date: 01 Sun, Sep 2013 – 11:41:12 PM

ಕರ್ನಾಟಕ ಚಲನಚಿತ್ರ  ಅಕಾಡಮಿರವರು ನಡೆಸುತ್ತಿರುವ ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದ  ಭವ್ಯ ಮನದಾಳದ ಮತ್ತು ಗತಕಾಲದ ನೆನಪುಗಳನ್ನು ಜ್ವಲಂತದಿಂದ ಹೇಳುತ್ತಾ ಹೋದರು. ಮನೆಯ ಪರೀದಿಯಲ್ಲಿ ಟಿವಿ ನೋಡುವುದಕ್ಕೂ ನಿಷೇದ ಇತ್ತು. ಇಂತಹ ವಾತವರಣದಲ್ಲಿ ಸಿದ್ದಲಿಂಗಯ್ಯನವರ ಸಹಕಾರದಿಂದ ಮೊದಲ ಚಿತ್ರ ಪ್ರೇಮಪರ್ವದಲ್ಲಿ ನಾಯಕಿಯಾಗುವ ಯೋಗ ಒಲಿದುಬಂತು.. ಸೆಂಟಿಮೆಂಟ್ ಪಾತ್ರಕ್ಕೆ ವಿಷ್ಣು ಸೈ, ಸಕಲಕಲಾವಲ್ಲಭ ಶಂಕರ್‌ನಾಗ್, ಅಂಬರೀಷ್ ವಿಶಾಲ ಹೃದಯ, ರವಿಚಂದ್ರನ್ ಕ್ರೇಜಿಸ್ಟಾರ್, ಅನಂತ್ನಾಗ್ ಮೂಡಿ  ಇವರುಗಳ ಜೊತೆ ನಟಿಸಿದ್ದು ನನ್ನ ಇಮೇಜ್‌ಗೆ ಮತ್ತಷ್ಟು ವರ್ಚಸ್ಸು ತಂದುಕೊಟ್ಟಿತ್ತು. ಆದರೆ ರಾಜ್‌ಕುಮಾರ್ ಜೊತೆ ನಟಿಸುವ ಅವಕಾಶ ಬರಲಿಲ್ಲ ಅದು ಇಂದಿಗೂ ನನ್ನನ್ನು ಏತಕ್ಕೆ ಎಂದು ಕಾಡುತ್ತಲೆ ಇದೆ. ನಾಯಕಿಯಾಗಿ ನಟಿಸಿ  ನನ್ನ ವಯಸ್ಸು ಎಚ್ಚರಿಸಿದ ಕಾರಣ ಪೋಷಕ ಪಾತ್ರ ಸರಿಯೆನಿಸಿತು ಅದನ್ನೆ ಮಾಡುತ್ತಾ ಬಂದಿರುತ್ತೇನೆ. ನಟಿಸಿದ ಸಂಖ್ಯೆ ಲೆಕ್ಕ ಇಲ್ಲದೆ ಇದ್ದರೂ ಸುಮಾರು ೧೫೦ ಚಿತ್ರಗಳು ಇರಬಹುದು.
೮೦ರಲ್ಲಿ ತೆರೆಕಾಣುತ್ತಿದ್ದ ಗುಣಮಟ್ಟದ ಚಿತ್ರಗಳು ಈಗ ಬರುತ್ತಿಲ್ಲ. ಆಗಿನ ಹಾಡುಗಳು ಈಗಲೂ ಗುನಗುತ್ತವೆ. ಪ್ರಸಕ್ತ ಗೀತೆಗಳು ಶಾಶ್ವತವಾಗಿ ಉಳಿಯುವುದಿಲ್ಲ. ಪ್ರಶಸ್ತಿ ವಿಜೇತ ಗಿರೀಶ್‌ಕಾಸರವಳ್ಳಿ ನಿರ್ದೇಶನದಲ್ಲಿ ನಟಿಸುವ ಇರಾದೆ ಇದೆ. ನಟಿಯರು ಚಿತ್ರರಂಗಕ್ಕೆ ಬರುವ ಮೊದಲು ಶೈಕ್ಷಣಿಕವಾಗಿ ಪ್ರಬುದ್ದವಾಗಿದ್ದರೆ ಒಳಿತು ಎಂದು  ಕಿವಿಮಾತು ಹೇಳಿದರು ಭವ್ಯ. ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಇದ್ದರೂ  ಯಾವುದೆ ಪ್ರಶಸ್ತಿ ಬಾರದೆ ಇರುವುದು ಬೇಸರ ತಂದಿದೆ. ಪ್ರಳಯಾಂತಕದಲ್ಲಿ ಅನಿವಾರ್ಯವಾಗಿ ಈಜುಡುಗೆ ತೊಡಬೇಕಾಯಿತು ಎಂದರು. ಪ್ರಸಕ್ತ ರಾಜ್ಯ ವಿಶ್ವಕರ್ಮ ಸಮಾಜದ ಮಹಿಳಾ ಘಟಕದ ರಾಜ್ಯಧ್ಯಕ್ಷಯಾಗಿ, ನಾರಾಯಣ ನೇತ್ರಾಲಯದ ನೇತ್ರದಾನ ಕುರಿತು ರಾಯಬಾರಿಯಾಗಿದ್ದೇನೆ. ರಾಜಕೀಯಕ್ಕೆ ಸೇರಿಕೊಂಡು ಸಮಾಜಸೇವೆ ಮಾಡುವ ಅಭೀಪ್ಸೆ ಇದೆ. ಕೌಟಂಬಿಕ ಜೀವನದ ಬಗ್ಗೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಯಜಮಾನರು ಗುಜರಾತಿನವರು. ಅವರಿಗೆ ಕನ್ನಡ ಬರುವುದಿಲ್ಲ. ನಾಲ್ಕು ಮಕ್ಕಳಿಗೆ ತಾಯಿಯಾಗಿ  ಸುಖಿ ಸಂಸಾರ ನಡೆಸುತ್ತಿದ್ದೇನೆ. ಅವರ ಬೆಂಬಲ ಇಲ್ಲದಿದ್ದರೆ ನಾನು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ ಎನ್ನುತ್ತಾ ತಾನು ನಟಿಸಿದ ಚಿತ್ರದ ಹಾಡಿನ ಸಾಲನ್ನು ಹೇಳಿ ಖುಷಿಪಟ್ಟರು. ಸರ್ಕಾರದ ಪ್ರಧಾನ ಕಾರ್ಯದರ್ಶಿ ಬಸವರಾಜು, ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್, ನಿರ್ದೇಶಕ ಭಗವಾನ್, ಪತಿ ಹಾಗೂ ಅತ್ತೆ ಉಪಸ್ತಿತರಿದ್ದರು
                                                                                                                                                                                                                                                                                                                                                                                                                                                                                                                                                                                                                         ಆರ್‌ಸಿಎಸ್


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed